ಇತ್ತೀಚೆಗೆ ಏನಾದರು ಓದಬೇಕು ಬಿಡುವಿನ ಸಮಯದಲ್ಲಿ ಅಂತ ಅನಿಸಿ, ಸಪ್ನಾ ಬುಕ್ ಹೌಸ್'ನಿಂದ ಕೆಲವು ಪುಸ್ತಕಗಳನ್ನು ತರಲು ಹೋದಾಗ ಅಲ್ಲಿ ಶಿವರಾಮ ಕಾರಂತರ ಜ್ಞಾನಪೀಠ ಪುರಸ್ಕ್ರತ 'ಮೂಕಜ್ಜಿಯ ಕನಸುಗಳು' ನನ್ನ ಕಣ್ ಸೆಳೆಯಿತು. ಸುಮಾರು ಮುನ್ನೂರು ಪುಟಗಳ ಚಿಕ್ಕ ಕಾದಂಬರಿ, ಅದರಲ್ಲಿ ಜ್ಞಾನಪೀಠ ತಗೊಳ್ಳುವಷ್ಟು ಸಾಹಿತ್ಯ ಇದ್ದಲ್ಲಿ ಅದನ್ನು ನಾವು ಓದದೇ ಇದ್ದರೆ ಹೇಗೆ ಎಂದು ಅನಿಸಿ ಮನೆಗೆ ತಂದೆ. ತಂದ ನಂತರ ಓದಲು ಸಮಯವೇ ಸಿಗದೆ ಅದು ಒಂದೆರಡು ತಿಂಗಳು ಹಾಗೆಯೆ ಉಳಿಯಿತು. ನಾನು ಕೋರಿಯಾದಿಂದ ಬಂದ ನಂತರ ಮತ್ತೆ ಅದರ ನೆನಪಾಗಿ ಓದಲು ಎತ್ತಿಕೊಂಡೆ. ಮೂಕಜ್ಜಿ ಎಂಬ ಹೆಸರೇ ಆ ಕಾದಂಬರಿಯನ್ನು ಆಕರ್ಷಕವಾಗಿ ಮಾಡಿದೆ ಎಂದರೆ ತಪ್ಪಾಗಲಾರದು.
ಕುಂದಾಪುರ ಮತ್ತು ಸುತ್ತಮುತ್ತಲ ಜಾಗಗಳಲ್ಲಿ ನೆಡೆಯುವ ಜನಜೀವನ ಕತೆಯಲ್ಲಿ ಬಿಂಬಿತವಾಗಿದೆ. ಕತೆ ಓದುತ್ತ ಹೋದಂತೆ ನೀವು ಒಂದು ಸುಮಾರು ೧೦೦ ವರ್ಷಗಳಷ್ಟು ಕಾಲದಲ್ಲಿ ಹಿಂದೆ ಹೋಗುವದಂತು ನಿಜ. ಆ ಕಾಲದ ಜೀವನ, ಆಗಿನ ಸಂಪ್ರದಯಗಳು, ಆಗಿನ ನಂಬಿಕೆ, ಇತ್ಯಾದಿ ನಿಮ್ಮ ಕಣ್ಮುಂದೆ ಬಂದು ನಿಲ್ಲುತ್ತದೆ. ಈ ಕತೆಯ ಪ್ರಮುಖ ಆಕರ್ಷಣೆ ಮೂಕಜ್ಜಿ ಮತ್ತು ಆಕೆಯ ಮೊಮ್ಮಗ ಸುಬ್ಬಣ್ಣ, ಅವರ ನಡುವೆ ನೆಡೆವ ಮಾತುಕತೆ ಇಲ್ಲಿ ಪ್ರಮುಖವಾದದ್ದು. ಶಿವರಾಮ ಕಾರಂತರು ಅಜ್ಜಿಗೆ ಒಂದು ವಿಷೇಷ ಶಕ್ತಿ ನೀಡಿದ್ದಾರೆ, ಅದೇನೆಂದರೆ, ಅವರ ಕೈಯಲ್ಲಿ ಏನಾದರು ವಸ್ತು ಸಿಕ್ಕಿದಲ್ಲಿ ಅವರಿಗೆ ಅದರ ಹಿಂದಿನ ಪೂರ್ತಿ ವಿವರಗಳು ಕಣ್ಣ ಮುಂದೆ ಬರುತ್ತವೆ. ಸುಬ್ಬಣ್ಣ ಸ್ವಲ್ಪ ಇತಿಹಾಸ ಓದಿದ್ದು, ತನ್ನ ಸುತ್ತಮುತ್ತ ಕಾಡುಗುಡ್ಡಗಳಲ್ಲಿ, ಗುಹೆಗಳಲ್ಲಿ ಅಲೆದಾಡಿ, ಅಲ್ಲಿ ಸಿಕ್ಕ ಕೆಲವು ಕಲ್ಲು, ಮೂಳೆಗಳನ್ನು ಅಜ್ಜಿಗೆ ತೋರಿಸಿ, ಅಜ್ಜಿಯ ಸಹಾಯದಿಂದ ಆ ಕಾಡುಗುಡ್ಡಗಳಲ್ಲಿ ಹಿಂದೆ ಇದ್ದಿರಬಹುದಾದ ನಾಗರಿಕತೆಗಳ ಬಗ್ಗೆ ತಿಳಿಯಲು ಮಾಡುವ ಪ್ರಯತ್ನ, ಅದರ ಎಡೆ ಎಡೆಯಲ್ಲೆ ನಮಗರಿವಿಲ್ಲದಂತೆ ನಮ್ಮಲ್ಲಿನ ನಂಬಿಕೆ (ಮೂಢನಂಬಿಕೆ) ಗಳ ತಳಕ್ಕ್ಕೆ ಪೆಟ್ಟು ನೀಡಿ, ನಮ್ಮ ಮನಸ್ಸಿನಲ್ಲಿರುವ ನೂರಾರು ದ್ವಂದ್ವಗಳಿಗೆ ಅಜ್ಜಿಯ ಮಾತುಗಳು ಸ್ಪಷ್ಟಿಕರಣ ನಿಡುವ ಬಗೆ ಇತ್ಯಾದಿಗಳನ್ನು ಅದ್ಭುತವಾಗಿ ಕತೆಯಲ್ಲಿ ಹೆಣೆದಿದ್ದಾರೆ.
ಈ ಪುಸ್ತಕ ನಮಗೆ ಮಾನವ ಜೀವನ, ಇತಿಹಾಸ, ಧಾರ್ಮಿಕ ನಂಬಿಕೆಗಳು, ಮಾನವ ಸಹಜ ನಡವಳಿಕೆಗಳು, ಸಂಸಾರ ಮತ್ತು ಆದ್ಯಾತ್ಮ ಮುಂತಾದುವುಗಳ ಬಗ್ಗೆ ಒಂದು ಹೊಸ ಕಲ್ಪನೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತದೆ. ಅಜ್ಜಿ ಎಂಬ ಪಾತ್ರ ನಿಜವಾಗಲೂ ಒಂದು ಅದ್ಭುತ ಕಲ್ಪನೆ, ಅವಳ ಕನಸುಗಳಲ್ಲಿ ಸಮಾಜವನ್ನು ತಿದ್ದುವ ಪ್ರಯತ್ನ ಇದೆ. ಅವಳು ಸಾವಿರಾರು ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾಗಿ, ದೇವರು ನಮ್ಮ ಸೃಷ್ಟಿ ಎಂಬುದನ್ನು ಎಲ್ಲರಿಗು ಅರ್ಥವಾಗುವ ಬಾಷೆಯಲ್ಲಿ ಹೇಳಿದ್ದಾರೆ. ಇದಕ್ಕೆ ಜ್ಞಾನಪೀಠ ನೀಡಿದ್ದು ಅವರ ಪ್ರತಿಭೆಗೆ ಸಂದ ಗೌರವ. ಇದೊಂದು ಅದ್ಬುತ ಗ್ರಂಥ. ಎಲ್ಲರು ಕೊಂಡು ಓದಿ ಸಂಗ್ರಹಿಸಿಟ್ಟು ಮುಂದಿನ ಪೀಳಿಗೆಗೆ ತಲುಪಿಸಬೇಕಾದ ಗ್ರಂಥ.
12 comments:
ಹೌದು...ನೀನು ಹೇಳಿದ್ದು ನಿಜ...ನನಗು ಇದನ್ನ ಒದಿ ಹಾಗೆ ಅನ್ಸ್ತು....ಮೂಕಜ್ಜಿಯ ಕನಸುಗಳು ಓದ್ತಾ ಆ ಹಳೆಯ ಪ್ರಪಂಚದಲ್ಲಿ ತೆಲುವುದು ಮಾತ್ರ ನಿಜ....ಅದು ಬೇರೆಯ ಪ್ರಪಂಚ.....ಶಿವರಾಮ್ ಕಾರಂತರ ಇನ್ನೊದು ಕಾದಂಬರಿ ಓದು ಅದು ಸಹ ನಿನ್ನನ್ನು ಇನ್ನೊಂದು ಪ್ರಪಂಚಕ್ಕೆ ಕರೆದೊಯ್ಯುವುದು ಅಂತು ನಿಜ, ಅದು "ಮರಳಿ ಮಣ್ಣಿಗೆ".
ya..even i have read ths book..its very nice..u can really feel that world...
@Divya
Thanks for comments
@Ragini
Thanks for reading..
Hi Prasad,
You have written the blog very well,
After returning to india, first I will read this novel, thanks for advising.
Regards
suneel
ಹಾಯ್, ನಾನು ಮುಕ್ತ.
ಒಳ್ಳೆಯದು. ಬಿಡುವಿನ ವೇಳೆಯಲ್ಲಿ ಈ ರೀತಿ ಪುಸ್ತಕಗಳನ್ನು ಓದುವ ಹವ್ಯಾಸ.
ಕಂಡಿತವಾಗಿಯೂ ನಾನು ಓದುವೆ.
ಮೂಕಜ್ಜಿಯ ಕನಸನ್ನು.
yes,,,, really Mokajjiya kanasugalu is a awesome novel.
please read "Marali mannige" which is the another beauty of KARANTH sir.
@Guru,
Yes, sure. I have purchased and kept it for reading. I was reading Mai Managala Suliyalli, which is also an awesome novel, next is Marali Mannige. Thanks for comments.
yes i have read ths book..its very nice.
yes,,,, really Mokajjiya kanasugalu is a awesome novel. I Love kannada Writers.....
@ Arun,
Thanks, keep supporting Kannada Writers :)
yes,,,, really Mokajjiya kanasugalu is valuable novel. I Love kannada .
Sure Dudes My support Always there For Kannada..........
Post a Comment