Pages

... W E L C O M E   T O   P R A S A D ' s   W E B P A G E ...

Wednesday, January 18, 2006

ಪ್ರೀತಿಯ ಸುಳಿಯಲ್ಲಿ...


ನಿನ್ನತ್ರ ಮಾತಾಡಲಿಕ್ಕೆ ಇನ್ನು ಏನು ಉಳಿದಿದೆ ಅಂತ ನನಗೊತ್ತಿಲ್ಲ. ಅದ್ರೆ ಹೇಳುವದೆಲ್ಲ ಹೇಳಿ ಆಗಿದೆ. ಪ್ರತಿ ಸಲ ನಿನಗರ್ತ ಆಗಿದೆ ಅಂತಲೇ ಅಂದುಕೊಂಡು ನಾ ಮೋಸ ಹೋದ ಹಾಗೆ ಅನ್ನಿಸ್ತಾ ಇದೆ.

ನೀನೇ ಹೇಳಿದ ಹಾಗೆ, ನನ್ನ ಮೂತಿಗೆ ಯಾರೂ ಸಿಗಲಿಲ್ಲ. ಎಲ್ಲ ಹಗಲುಗನಸಾತು. ಆ ದು:ಖದಿಂದ ಮೇಲೆದ್ದ ಹಾಗೆ ನಿನ್ನ ಪ್ರೀತಿಯಲ್ಲಿ ಬಿದ್ದೆ. ನಿಜವಾದ ಪ್ರೀತಿಯೇಂದೇ ನಂಬಿದೆ. ಈಗೀಗ ಅದು ನಾಟಕವೇನೋ ಅನ್ನಿಸತೊಡಗಿದೆ.

ಬರಿಯ ಬಾಮಾತಲ್ಲಿ ನಿನ್ನ ಪ್ರೀತಿಸುತ್ತೇನೆಂದು ಕೇಳಿದಗೆಲ್ಲ ಹೇಳಿ ಹಿಂದಿನಿಂದ ನೀ ಮಾಡುತ್ತಿರುವದೇನು? ನೀ ಪ್ರೀತಿ ತೋರಿಸಿದ್ದೆಲ್ಲಿ?... ನಿನ್ನ ಮಾತಿನಲ್ಲೆ?... ನಿನ್ನ ನೆಡೆಯಲ್ಲೇ?... ಎಲ್ಲಿ?... ನಾನೇ ನಿನ್ನ ಹಿಂದೆ ಅಲೆದು ಅಲೆದು ನಿನ್ನ ಪ್ರೀತಿಗಾಗಿ ಹುಡುಕಾಡಿದೆ. ನೀನೋ ಮರೀಚಿಕೆಯಂತೆ ಪ್ರೀತಿಯಾಗಿ ಕಂಡು ಬಂದೆ. ಅದ ನಂಬಿ ನೆಡೆದು ನೆಡೆದು ನಾ ಇನ್ನಷ್ಟು ಬಳಲಿದೆ. ಬಾಯಾರಿದವನ ಬಳಲಿಸಿ ಸಾಯಿಸಬೇಕೆಂದಿರುವೆಯ?...

ನಿನ್ನ ಪ್ರೀತಿಗಾಗಿ ಕಾದು ಕಾದು ಜೀವಂತ ಹೆಣವಾಗಿದ್ದೇನೆ. ನಿನ್ನ ಪ್ರೀತಿ ಸಿಗುವ ಯಾವ ಸೂಚನೆಗಳು ಕಾಣುತ್ತಿಲ್ಲ. ನನ್ನ ಬದುಕು ನನಗೇ ಬೇಸರವಾಗಿದೆ, ಮನದಲ್ಲಿ ಬದುಕುವ ಯಾವ ಆಸೆಯೂ ಉಳಿದಿಲ್ಲ. ನೀ, ನೀನಿಷ್ಟ ಪಟ್ಟ ಹಾಗೆ ಸಂತೋಷವಾಗಿರು. ನನ್ನ ಬಾಳಲಂತೂ ನೀ ಹೊಂಗಿರಣವಾಗಿ ಬರಲಿಲ್ಲ, ನಾನು ನಿನ್ನ ಬಾಳಲ್ಲಿ ಮುಳ್ಳಾಗಿ ಬರಲು ಬಯಸುವದಿಲ್ಲ, ನನ್ನ ಹೃದಯದಲ್ಲಿರುವ ನಿನ್ನ ನೆನಪುಗಳೇ ನನಗೆ ಸಾಕು.

ನಮ್ಮಿಬ್ಬರ ನಡುವಿನ ಎಲ್ಲ ಆಟಗಳು ಮುಗಿದಿವೆ. ಈಗ ಕಣ್ಣಮುಚ್ಚಾಲೆಯೇ?.. ನೀ ಎಲ್ಲಿ ಮರೆಯಾಗಿ ಹೋಗುವೆಯೋ ಗೊತ್ತಿಲ್ಲ. ಯಾರ ತೋಳ ತೆಕ್ಕೆಯಲ್ಲಿ ಖುಶಿ ಕಾಣುವೆಯೋ ಗೊತ್ತಿಲ್ಲ. ಆದರೆ ಒಂದಂತೂ ನಿಜ. ನೀ ನನಗೆ ಉಳಿಸಿ ಹೋಗಿರುವದು ಮುಗಿಯದ ಹುಡುಕಾಟ. ಅದು ನಿನ್ನ ಪ್ರೀತಿ. ಈ ಜನ್ಮದಲ್ಲಿ ಸಿಗುವದಿಲ್ಲ ಅಂತ ಗೊತ್ತಿದೆ, ಅದರೆ ಮನಸು ಅದಕ್ಕಾಗಿ ಹಾತೊರೆದಿದೆ. ಆ ಪ್ರೀತಿ ಇನ್ನಾವ ಹೆಣ್ಣಿನಲ್ಲೋ ನಾನರಿಯೆ. ನನ್ನ ಬಗ್ಗೆ ನಾನೇ ತಿಳಿಯಲಾರದ ಸ್ಥಿತಿಯಲ್ಲಿರುವೆ.

ನಿನ್ನ ಮೇಲಿನ ಬೆಟ್ಟದಷ್ಟು ಪ್ರೀತಿ ಬಿಸಿಲಿಗೆ ಕರಗುವ ಮಂಜಿನಂತೆ ಕರಗಿ ಕಣ್ಣ ನೀರಾಗಿ ಹರಿಯುತ್ತಿದೆ. ಅದರ ಪ್ರವಾಹದಲ್ಲಿ ನಿನ್ನ ಪ್ರೀತಿಯ ಹಸಿರಾದ ಸವಿನೆನಪುಗಳು ಕೊಚ್ಚಿ ಹೋಗುತ್ತಿವೆ. ಕಣ್ಣ ನೀರು ಬತ್ತುತ್ತಿದೆ. ಮನ ನೀರಿಲ್ಲದ ಮರುಭೂಮಿಯಾಗುತ್ತಿದೆ. ಮರಳ ದಿಣ್ಣೆಗಳ ಹತ್ತಿ ಇಳಿದು ಹುಚ್ಚು ಮನಸು ಸಾಗುತ್ತಿದೆ. ನಿನ್ನ ಮೇಲಿನ ಪ್ರೀತಿ ದ್ವೇಷವಾಗುತ್ತಿದೆ. ಅದ ತಡೆಯಲು ನಿನ್ನ ನಾಟಕದ ಮಾತುಗಳಿಗೆ ಸಾದ್ಯವಾಗುತ್ತಿಲ್ಲ.

ಬಾಳು ಬರಡಾಯಿತು. ಅದರೂ ಎಲ್ಲೋ ಮನದ ಮೂಲೆಯಲ್ಲಿ ಆಸೆಯ ಕುಡಿ ಇನ್ನಾರದೋ ಪ್ರೀತಿಯ ಮುಂಗಾರ ಮಳೆಗಾಗಿ ಕಾದು ಕುಳಿತಿದೆ. ನಿನ್ನಿಂದ ಬಲುದೂರ ಸಾಗಿಯಾಗಿದೆ. ವಾಪಾಸು ಬರಲಾಗದಷ್ಟು ದೂರ, ಕೈ ಬಿಸಿ ಕರೆದರೂ ಕಾಣದಷ್ಟು ದೂರ. ಕಣ್ಣಂಚಿನ ದಿಗಂತದಲ್ಲಿ ನಿನ್ನ ಚಿತ್ರ ಮರೆಯಾಗತೊಡಗಿದೆ. ಎಲ್ಲೆಲ್ಲೂ ಕತ್ತಲಾದಂತೆ ಬಾಸವಾಗಿದೆ. ದಿಕ್ಕು ತಪ್ಪಿದಂತೆ ಮನಸ್ಸು ಎಲ್ಲೆ ಮೀರಿ ಓಡುತ್ತಿದೆ. ಬದುಕೆ ದುಸ್ತರ.

ಓ ಒಲವೇ ನೀನೇಷ್ಟು ಘೋರ..? ಎಷ್ಟು ಪರಾಕ್ರಮಿ ನಿನ್ನ ಇನ್ನೋಂದು ಮುಖದ ಪರಿಚಯ..!! ಅದೆಷ್ಟು ಭಯಾನಕ, ಆಘಾತಕಾರಿ, ಆಕಸ್ಮಿಕ, ನಿಘೂಢ..!!

0 comments: