Pages

... W E L C O M E   T O   P R A S A D ' s   W E B P A G E ...

Thursday, September 17, 2009

Let's go Korean


The other day, as usual I came out of the guest house thinking of going to restaurant for having a cup of tea. I was shocked to see a big vehicle rushing fast towards me, blowing heavy smoke, which almost covered the whole of back, for a moment I did not understand what to do! I ran back to the guest house and was inside in a minute. The vehicle passed by, and the whole street is covered with smoke, it did smell something, I did not bother, I was wondering what the f*** is happening. I saw some kids running behind that vehicle in their cycle in that smoke, so I was kind of relaxed as to it may not be a toxic smoke. Now I started smelling the smoke, it smelled something between petrol and kerosene oil. I was still wondering what it could be, with these thoughts still in my mind I walked in that smoke till restaurant. While having tea, I asked our guest house owner about the incident, he said, its municipality people spraying smokes to control mosquitoes!! Alas!! I wish BBMP to do something similar to prevent Chicken Guinea and Malaria etc.

The amusement still did not stop that day; I came out of the restaurant and was sipping my cup of tea watching the 40 storied Samsung building next to our guest house on the other side of the main road. A fellow came in car, was dressed neatly, pulled out some road blockers and placed around a drain opening, he put on another jacket type dress to cover his body, opened the lid, placed the ladder (which was present inside) and got inside that drain opening. After a while, he came up, took off the jacket and placed the ladder back, and came back to car. I thought his work is over! I was thinking how professional it is, can we expect this in India? to my surprise he came back with his bag, pulled out a sheet of paper, seemed like some receipt, and filled in some details(must be the drain code number !) and then placed it next to the drain and took a photo with his digital camera!!. Oh god, see how they are using the technology, in fact they are not using it they are exploiting the tech to the max possible. He packed and left, but I was standing there still thinking, man how far we are from them, how long does it take for us to catch up with them?

Few days later today, I was coming back from office to guest house for lunch, I saw a pizza guy giving the order to someone, as usual. He calculated and said you have pay "Some X" amount; the lady gave her credit card to the pizza guy. He had a wireless swiping machine; he swiped and gave her the receipt. That confirmed me that we are too far in using the technology for day to day life. So let’s go Korean :)

Friday, April 17, 2009

ಶಿವಧನಸ್ಸು ಮುರಿದಾಗ..


ಸೈಬ್ರಕಟ್ಟಿಯಿಂದ ಸಿದ್ದಾಪುರ ಹೋಪತಿಗೆ ಶಿರಿಯಾರ ಅಂದಳಿ ಒಂದ್ ಊರ್ ಸಿಕ್ಕತ್, ನೀವೆಲ್ಲ ಕೆಂಡಿಪ್ಪುಕು ಸಾಕ್. ಅಲ್ಲಿಗೆ ಶಿರಿಯಾರ ಅಂದಳಿ ಹೆಸ್ರ್ ಹೆಂಗ್ ಬಂತ್ ಅಂದಳಿ ಯಾರೊ ಒಬ್ರ್ ಮಾತಾಡ್ತ ಇದ್ದಿರ್, ಅವರ್ ಯಾರ್ ಅಂದಳಿ ಇಲ್ಲ್ ಬೇಡ ಈಗ. ಅದ್ರೆ ಅವ್ರ್ ಹೇಳು ಮಾತಿನ್ ಸ್ವಾರಸ್ಯ ಒಳ್ಳೆ ಇತ್. "ಶಿರಿಯಾರ ಅಂದ್ರೆ ಸಾಮನ್ಯ ಅಲ್ಲ, ಒಂದ್ ಕಾಲದಂಗೆ ಇಲ್ಲ್ ಚಿನ್ನ ಬೆಳ್ಳಿ ಎಲ್ಲಾ ಬೇಕಾದಷ್ಟು ಇದ್ದ್, ಜನರೆಲ್ಲ ಮಸ್ತ್ ದುಡ್ಡಿನರ್ ಆಯಿ ಇದ್ದಿರ್, ಹಾಂಗಾಯಿ, ಸಿರಿ ಆರದ ಊರು ಅಂದಳಿ ಹೆಸ್ರ್ ಅಯಿತ್, ಅದೆ ಕಡಿಕೆ ಆಡು ಮಾತಲ್ಲಿ ಶಿರಿಯಾರ ಆದ್ದ್ ಅಂತಿದ್ದಿರ್. ಅದ್ ಎಷ್ಟ್ ಸಿರಿ ಇದ್ದಿತೊ? ಅದನ್ನ ಯಾರ್ ಹೊತ್ಕ ಹೋರೊ ಆ ದೇವ್ರೇ ಹೇಳ್ಕ್. ಅದಕ್ಕೆ ಅವ್ರಿಗೆ ಅಯ್ದಿದ್ದರ್ ಒಬ್ರ್ ಅವರ್ ಮಾತಿಗೆ ಅಡ್ಡಕೋಲ್ ಹಾಕಿ, ಸಿರಿ ಯಾರದ್ದ್? ಅಂಬುಕ್ ಶುರು ಮಾಡ್ರ್. ಅವರ್ ಮಾತಿನ್ ಒಳಾರ್ಥ ಇಷ್ಟೆ. ಸಿರಿ ಇವರದ್ದ್ ಅಲ್ಲ, ಬೇರೆ ಎಲ್ಲಿಂದೊ ಕದ್ದ್ ತಂದದ್ದ್ ಅಂದಳಿ. ಶಿರಿಯಾರದ್ ಬದಿಯರ್ ಇದ್ರೆ ಕ್ಷಮೆ ಇರಲಿ :)

ಶಿರಿಯಾರ ಶಾಲಿ ಗೊತ್ತಿತ್ತಲೆ, ಆಗಳಿಗೆ ಅಲ್ಲ್ ಕಲ್ತರೊಬ್ಬರ್ ಹೇಳು ಮಾತ್. ಅವರ್ ಹೇಳುದ್, ನಮ್ಮನ್ನೆಲ್ಲ ಕಾರಿ ಬಾರ್ದಿದ್ದರ್ ಮಾಡದ್ದೆ ನಮ್ಮ ಹೆಡ್ ಮಾಷ್ಟ್ರ್ ಅಂದಳಿ. ಆಗಳಿಗೆ ಮಕ್ಕಳ್ನೆಲ್ಲ ಹೆಡ್ ಮಾಷ್ಟ್ರ್ ಅವರ್ ಮನಿ ಅಡಿಕೆ ತೋಟಕ್ಕೆ ಮಂಗ ಎಬ್ಬುಕೆ ಕಳ್ಸುದಂಬ್ರ್. ಯಾರ್ ಜಾಸ್ತಿ ಮಂಗ ಬೆರ್ಸ್ತ್ರೊ ಅವ್ರಿಗೆ ಜಾಸ್ತಿ ಮಾರ್ಕ್. ಹೇಂಗೆ? ಹೀಂಗ್ ಕಲ್ತ್ ಮಕ್ಕಳ್ ಉದ್ದಾರ ಆಪುದ್ ಹೌದಾ?

ಹೀಂಗಿಪ್ಪೊತ್ಲಿ, ಒಂದ ಸಲ ಶಾಲಿಗೆ ಇನ್ಸ್ಪೆಕ್ಟ್ರ್ ಬಂದ್ರ್ ಅಂಬ್ರ್. ಆರನೇ ಕ್ಲಾಸಿಗೆ ಆಗಳಿಗೆ ಯಾರೊ ಶೆಟ್ರ್ ಮಾಷ್ಟ್ರ್ ಅಂಬ್ರಪ. ಇನ್ಸ್ಪೆಕ್ಟ್ರ್ ಒಂದ್ ಗಂಡಿನ್ ನಿಲ್ಸಿ ಕೆಂಡ್ರ್ ಅಂಬ್ರ್, "ಶಿವ ಧನಸ್ಸು ಮುರದ್ದ್ ಯಾರ್?" ಅಂದಳಿ. ಅದಕ್ಕೆ ಅವ "ಕೃಷ್ಣ" ಅಂದ ಅಂಬ್ರ್. ಕೃಷ್ಣ ಅಂಬನ್ ಎದ್ದ್ ನಿತ್, "ನಾನಲ್ಲ" ಅಂದ ಅಂಬ್ರ್. ಇನ್ಸ್ಪೆಕ್ಟ್ರಿಗೆ ಸಿಟ್ಟ್ ಬಂದ್ ಮಾಷ್ಟ್ರಿಗೆ "ಎಂತ ಮಾಷ್ಟ್ರೆ ಇದ್?" ಅಂದಳಿ ಕೆಂಡ್ರೆ ಮಾಷ್ಟ್ರ್ "ಅವ ಮುರುಕಾಪನಲ್ಲಪ.. ಇವನ್ನಾರು ಹೇಳುಕಿಲ್ಲೆ.." ಅಂದ್ರಂಬ್ರ್.

ಇದನ್ನೆಲ್ಲ ಕೆಂಡ್ ಸಿಕ್ಕಾಪಟ್ಟೆ ಸಿಟ್ ಬಂದ್ ಇನ್ಸ್ಪೆಕ್ಟ್ರ್ ಸೀದಾ ಹೆಡ್ ಮಾಷ್ಟ್ರ್ ಹತ್ರ ಹೋರ್ ಅಂಬ್ರ್. ಆಗಳಿಕ್ ನಾರಯಣ್ ಮಾಷ್ಟ್ರ್ ಹೆಡ್ ಮಾಷ್ಟ್ರ್ ಅಂಬ್ರ್. ಇನ್ಸ್ಪೆಕ್ಟ್ರ್, "ಎಂತ ಮಾಷ್ಟ್ರೆ, ನೀವೇ ಹೇಳಿ, ಆ ಹುಡ್ಗನ್ ಹತ್ರ ಶಿವ ಧನಸ್ಸು ಮುರದ್ ಯಾರ್ ಕೇಂಡ್ರೆ, ಕೃಷ್ಣ ಅಂತ, ಮತ್ತೊಬ್ಬ ನಾನಲ್ಲ ಅಂತ, ಕ್ಲಾಸ್ ಟೀಚರ್, ಅವನ್ ಮುರುಕಾಪನಲ್ಲ ಅಂತ್ರ್. ಇದೆಂತ ಕಥಿ?" ಅಂದಳಿ ನಾರಾಯ್ಣ್ ಮಾಷ್ಟಿಗೆ ಕೇಂಡ್ರೆ, ನಾರಾಯ್ಣ್ ಮಾಷ್ಟ್ರ್ ಯಾವ್ದೊ ಮನಿ ಬದಿ ತಲಿಬಿಸಿಯಂಗ್ ಇದ್ದಿರ್ ಅಂಬ್ರ್. ಅವರ್ ಅದಕ್ಕೆ "ಅದ್ ಯಾರೆ ಮುರ್ದಿರ್ಲಿ.. ಅದ್ರ್ ದಂಡ ನಾನ್ ಕೊಡ್ತೆ.. !" ಅಂದ್ರ್ ಅಂಬ್ರ್.


ಈ ತರ ಶಿರಿಯಾರ ಬದಿಯ ಹಾಸ್ಯ ಘಟನೆಗಳು ತುಂಬಾ ಇವೆ, ಅವನ್ನೆಲ್ಲೆ ನಿಮ್ಮ ಮುಂದೆ ತರುವುದರ ಒಂದು ಚಿಕ್ಕ ಪ್ರಯತ್ನ ಇದು.

Friday, January 16, 2009

ಮೂಕಜ್ಜಿಯ ಕನಸುಗಳು


ಇತ್ತೀಚೆಗೆ ಏನಾದರು ಓದಬೇಕು ಬಿಡುವಿನ ಸಮಯದಲ್ಲಿ ಅಂತ ಅನಿಸಿ, ಸಪ್ನಾ ಬುಕ್ ಹೌಸ್'ನಿಂದ ಕೆಲವು ಪುಸ್ತಕಗಳನ್ನು ತರಲು ಹೋದಾಗ ಅಲ್ಲಿ ಶಿವರಾಮ ಕಾರಂತರ ಜ್ಞಾನಪೀಠ ಪುರಸ್ಕ್ರತ 'ಮೂಕಜ್ಜಿಯ ಕನಸುಗಳು' ನನ್ನ ಕಣ್ ಸೆಳೆಯಿತು. ಸುಮಾರು ಮುನ್ನೂರು ಪುಟಗಳ ಚಿಕ್ಕ ಕಾದಂಬರಿ, ಅದರಲ್ಲಿ ಜ್ಞಾನಪೀಠ ತಗೊಳ್ಳುವಷ್ಟು ಸಾಹಿತ್ಯ ಇದ್ದಲ್ಲಿ ಅದನ್ನು ನಾವು ಓದದೇ ಇದ್ದರೆ ಹೇಗೆ ಎಂದು ಅನಿಸಿ ಮನೆಗೆ ತಂದೆ. ತಂದ ನಂತರ ಓದಲು ಸಮಯವೇ ಸಿಗದೆ ಅದು ಒಂದೆರಡು ತಿಂಗಳು ಹಾಗೆಯೆ ಉಳಿಯಿತು. ನಾನು ಕೋರಿಯಾದಿಂದ ಬಂದ ನಂತರ ಮತ್ತೆ ಅದರ ನೆನಪಾಗಿ ಓದಲು ಎತ್ತಿಕೊಂಡೆ. ಮೂಕಜ್ಜಿ ಎಂಬ ಹೆಸರೇ ಆ ಕಾದಂಬರಿಯನ್ನು ಆಕರ್ಷಕವಾಗಿ ಮಾಡಿದೆ ಎಂದರೆ ತಪ್ಪಾಗಲಾರದು.

ಕುಂದಾಪುರ ಮತ್ತು ಸುತ್ತಮುತ್ತಲ ಜಾಗಗಳಲ್ಲಿ ನೆಡೆಯುವ ಜನಜೀವನ ಕತೆಯಲ್ಲಿ ಬಿಂಬಿತವಾಗಿದೆ. ಕತೆ ಓದುತ್ತ ಹೋದಂತೆ ನೀವು ಒಂದು ಸುಮಾರು ೧೦೦ ವರ್ಷಗಳಷ್ಟು ಕಾಲದಲ್ಲಿ ಹಿಂದೆ ಹೋಗುವದಂತು ನಿಜ. ಆ ಕಾಲದ ಜೀವನ, ಆಗಿನ ಸಂಪ್ರದಯಗಳು, ಆಗಿನ ನಂಬಿಕೆ, ಇತ್ಯಾದಿ ನಿಮ್ಮ ಕಣ್ಮುಂದೆ ಬಂದು ನಿಲ್ಲುತ್ತದೆ. ಈ ಕತೆಯ ಪ್ರಮುಖ ಆಕರ್ಷಣೆ ಮೂಕಜ್ಜಿ ಮತ್ತು ಆಕೆಯ ಮೊಮ್ಮಗ ಸುಬ್ಬಣ್ಣ, ಅವರ ನಡುವೆ ನೆಡೆವ ಮಾತುಕತೆ ಇಲ್ಲಿ ಪ್ರಮುಖವಾದದ್ದು. ಶಿವರಾಮ ಕಾರಂತರು ಅಜ್ಜಿಗೆ ಒಂದು ವಿಷೇಷ ಶಕ್ತಿ ನೀಡಿದ್ದಾರೆ, ಅದೇನೆಂದರೆ, ಅವರ ಕೈಯಲ್ಲಿ ಏನಾದರು ವಸ್ತು ಸಿಕ್ಕಿದಲ್ಲಿ ಅವರಿಗೆ ಅದರ ಹಿಂದಿನ ಪೂರ್ತಿ ವಿವರಗಳು ಕಣ್ಣ ಮುಂದೆ ಬರುತ್ತವೆ. ಸುಬ್ಬಣ್ಣ ಸ್ವಲ್ಪ ಇತಿಹಾಸ ಓದಿದ್ದು, ತನ್ನ ಸುತ್ತಮುತ್ತ ಕಾಡುಗುಡ್ಡಗಳಲ್ಲಿ, ಗುಹೆಗಳಲ್ಲಿ ಅಲೆದಾಡಿ, ಅಲ್ಲಿ ಸಿಕ್ಕ ಕೆಲವು ಕಲ್ಲು, ಮೂಳೆಗಳನ್ನು ಅಜ್ಜಿಗೆ ತೋರಿಸಿ, ಅಜ್ಜಿಯ ಸಹಾಯದಿಂದ ಆ ಕಾಡುಗುಡ್ಡಗಳಲ್ಲಿ ಹಿಂದೆ ಇದ್ದಿರಬಹುದಾದ ನಾಗರಿಕತೆಗಳ ಬಗ್ಗೆ ತಿಳಿಯಲು ಮಾಡುವ ಪ್ರಯತ್ನ, ಅದರ ಎಡೆ ಎಡೆಯಲ್ಲೆ ನಮಗರಿವಿಲ್ಲದಂತೆ ನಮ್ಮಲ್ಲಿನ ನಂಬಿಕೆ (ಮೂಢನಂಬಿಕೆ) ಗಳ ತಳಕ್ಕ್ಕೆ ಪೆಟ್ಟು ನೀಡಿ, ನಮ್ಮ ಮನಸ್ಸಿನಲ್ಲಿರುವ ನೂರಾರು ದ್ವಂದ್ವಗಳಿಗೆ ಅಜ್ಜಿಯ ಮಾತುಗಳು ಸ್ಪಷ್ಟಿಕರಣ ನಿಡುವ ಬಗೆ ಇತ್ಯಾದಿಗಳನ್ನು ಅದ್ಭುತವಾಗಿ ಕತೆಯಲ್ಲಿ ಹೆಣೆದಿದ್ದಾರೆ.

ಈ ಪುಸ್ತಕ ನಮಗೆ ಮಾನವ ಜೀವನ, ಇತಿಹಾಸ, ಧಾರ್ಮಿಕ ನಂಬಿಕೆಗಳು, ಮಾನವ ಸಹಜ ನಡವಳಿಕೆಗಳು, ಸಂಸಾರ ಮತ್ತು ಆದ್ಯಾತ್ಮ ಮುಂತಾದುವುಗಳ ಬಗ್ಗೆ ಒಂದು ಹೊಸ ಕಲ್ಪನೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗುತ್ತದೆ. ಅಜ್ಜಿ ಎಂಬ ಪಾತ್ರ ನಿಜವಾಗಲೂ ಒಂದು ಅದ್ಭುತ ಕಲ್ಪನೆ, ಅವಳ ಕನಸುಗಳಲ್ಲಿ ಸಮಾಜವನ್ನು ತಿದ್ದುವ ಪ್ರಯತ್ನ ಇದೆ. ಅವಳು ಸಾವಿರಾರು ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾಗಿ, ದೇವರು ನಮ್ಮ ಸೃಷ್ಟಿ ಎಂಬುದನ್ನು ಎಲ್ಲರಿಗು ಅರ್ಥವಾಗುವ ಬಾಷೆಯಲ್ಲಿ ಹೇಳಿದ್ದಾರೆ. ಇದಕ್ಕೆ ಜ್ಞಾನಪೀಠ ನೀಡಿದ್ದು ಅವರ ಪ್ರತಿಭೆಗೆ ಸಂದ ಗೌರವ. ಇದೊಂದು ಅದ್ಬುತ ಗ್ರಂಥ. ಎಲ್ಲರು ಕೊಂಡು ಓದಿ ಸಂಗ್ರಹಿಸಿಟ್ಟು ಮುಂದಿನ ಪೀಳಿಗೆಗೆ ತಲುಪಿಸಬೇಕಾದ ಗ್ರಂಥ.