Pages

... W E L C O M E   T O   P R A S A D ' s   W E B P A G E ...

Monday, May 21, 2007

ಮುಂಗಾರು ಮಳೆಯ ಹಿಂದೆ..


"ಮುಂಗಾರು ಮಳೆ", ಈ ಚಿತ್ರ ನೋಡಬೇಕೆಂದು ತುಂಬಾ ದಿನದಿಂದ ಇದ್ದ ಆಸೆ ಅಷ್ಟಿಷ್ಟಲ್ಲ. ಜೆರ್ಮನಿಯಲ್ಲಿರಬೇಕಾದರೆ ಯಾರದರು ನೆಟ್ನಲ್ಲಿ ಅಪ್ಲೊಡ್ ಮಾಡ್ತಾರ ಅಂತಾ ತುಂಬಾ ಕಡೆಯೆಲ್ಲ ಹುಡುಕಿ, ಕೊನೆಗೊಮ್ಮೆ ಕ್ಯಾಮರ ಪ್ರಿಂಟ ಸಿಕ್ಕಿದಾಗ, ಅದು ಕೆಟ್ಟದಾಗಿದ್ದನ್ನ ನೋಡಿ, ಚಿತ್ರ ನೋಡಿದರೆ ಟಾಕೀಸ್ನಲ್ಲೆ ನೋಡಬೇಕೆಂದು ತೀರ್ಮಾನ ಮಾಡಿದ್ದೆ. ಇಂಡಿಯಾಗೆ ವಾಪಾಸು ಬಂದ ಮೇಲೆ ಮೊದಲು ಈ ಪಿಕ್ಚರ್ ನೋಡಬೇಕು ಅಂದೆಲ್ಲ ಅಂದುಕೊಂಡರು ನೊಡಲು ಕಾಲ ಕೂಡಿ ಬರಲೇ ಇಲ್ಲ. ಬರಿಯ ಹಾಡುಗಳನ್ನ ಮತ್ತು ಒಂದೆರಡು ಸೀನ್ ಗಳನ್ನ ನೋಡಿದ್ದು, ಅದರ ಬಗ್ಗೆ ಕೇಳಿದ್ದ, ಒದಿದ್ದ ವಿಷಯಗಳು ಮನಸ್ಸಿನಲ್ಲಿ ಚಿತ್ರದ ಬಗ್ಗೆ ತುಂಬಾ ನಿರಿಕ್ಷೆಯನ್ನ ಹುಟ್ಟಿಹಾಕಿದ್ದವು. ಚಿತ್ರದ ಇಷ್ಟರವರೆಗಿನ ಗಳಿಕೆ ೩೦ ಕೋಟಿ ಎಂದು ಓದಿದ ಮೇಲಂತೂ ಈ ಚಿತ್ರ ನೋಡಲೇ ಬೇಕೆಂಬ ಹಟ ಬಂದು ಬಿಟ್ಟಿತ್ತು.

ಇಂಡಿಯಾಗೆ ಬಂದ ಮೊದಲ ವಾರ ಊರಲ್ಲೇ ಕಳೆದುದರಿಂದಾಗಿ ಮೂವಿ ನೋಡಲು ಅವಕಾಶವಾಗಲಿಲ್ಲ. ನಂತರದ ಒಂದು ವಾರಂತ್ಯ ಒಬ್ಬ ಬಡ್ಡಿಮಗನ್ನ ಮೀಟ್ ಆಗಬೇಕು ಅಂತ ಕಳೆದುಹೋಯಿತು. ಅವನು ಸಿಗಲಿಲ್ಲ, ಮೂವಿನೂ ನೋಡಲಾಗಲಿಲ್ಲ. ಕೊನೆಗೂ ಅದನ್ನ ನೋಡಲೇಬೇಕು ಅಂತ ವಾರಂತ್ಯದ ಎಲ್ಲ ಕಾರ್ಯಕ್ರಮಗಳನ್ನ ಮುಂದಕ್ಕೆ ಹಾಕಿ ಕುಳಿತೆ. ಶನಿವಾರ ಬಂದೇ ಬಿಟ್ಟಿತು. ಎಂದಿನಂತೆ ಬೆಳಿಗ್ಗೆ ಏಳುವಾಗಲೇ ೯ ಆಗಿದ್ದರಿಂದ ಬೆಳಿಗ್ಗಿನ ಶೊ ನೋಡೊಕೆ ಸಾಧ್ಯವಾಗಲಿಲ್ಲ. ಮತ್ತೆ ತಿಂಡಿ ಎಲ್ಲ ತಿಂದ ಮೇಲೆ ಯಾಕೊ ಉದಾಸಿನವಾದ ಹಾಗೆ ಆಗಿ ಸಂಜೆ ೪.೩೦ ಶೊಗೆ ಹೊಗುವದು ಅಂತ ತಿರ್ಮಾನವಯಿತು. ಊಟ ಮುಗಿದು, ಸ್ನಾನ ಮಾಡಿ (ತುಂಬ ಸೆಕೆ ಅಲ್ಲವೆ, ಅದಕ್ಕೆ ಸಮಯ ಸಿಕ್ಕಾಗೆಲ್ಲ ಒಂದು ಸ್ನಾನ) ಅಂತು ೩ ಗಂಟೆಗೆ ರೆಡಿ! ಕಾರಲ್ಲಿ ಹೋದರೆ ಪಾರ್ಕಿಂಗ್ ಪ್ರೊಬ್ಲೆಮ್ ಅಗತ್ತೆ ಅಂತ ಎಣಿಸಿ ಬಸ್ಸಲ್ಲೇ ಹೋಗುವದು ಅಂತ ಅಂದುಕೊಂಡು ಬಸ್ ಸ್ಟಾಂಡ್ ಹತ್ರ ಬಂದ್ರೆ ಬಸ್ಸೇ ಇಲ್ಲ.. ನಾನು ಬೆಂಗಳೂರಿಗೆ ಬಂದಾಗಿಂದ ಬಸ್ಸಲ್ಲಿ ಓಡಾಡಿದ್ದೆ ಅಪರೂಪ. ಹಾಗಿರುವಾಗ ಈ ಕಗ್ಗದಾಸಪುರವೆಂಬ ಕಗ್ಗತ್ತಲ ಊರಿಂದ ಮೆಜೆಸ್ಟಿಕ್ ಕಡೆ ಹೋಗಲು ಸರಿಯಾದ ಬಸ್ಸು ವ್ಯವಸ್ತೆ ಇಲ್ಲವೆಂಬ ಕಲ್ಪನೆಯೂ ಇರಲಿಲ್ಲ, ಬಸ್ಸು ಬರಲೇ ಇಲ್ಲ. ಅಲ್ಲೆ ೪೫ ನಿಮಿಷ ಕಳೆದು, ೩.೪೫ ಆದಾಗಲೇ ಇವತ್ತು ಮೂವಿ ನೋಡಿದ ಹಾಗೆ ಅಂದುಕೊಂಡೆ. ಕೊನೆಗೂ ಬಸ್ಸು ಬಂತು. ಅದು ಇಂದಿರಾನಗರದ ವರೆಗೆ ಮಾತ್ರ ಅಂತ ಕಂಡಕ್ಟರ ಹೇಳಿದಾಗ ತಲೆ ಮೇಲೆ ಕಲ್ಲು ಎತ್ತಿ ಹಾಕಿದ ಹಾಗೆ ಅಯಿತು. ಇಂದಿರಾನಗರ ಬಂದು ಇಳಿಯುವಾಗಲೇ ೪.೩೦.!! ಇನ್ನೇನು ಮಾಡುವದು ಎಂದು ಒಂದು ಕ್ಷಣ ಆಲೋಚಿಸಿದಾಗ, ಸಿಕ್ಕಿದ ಉತ್ತರ ಹೀಗೆ... ಇನ್ನು ೭.೩೦ ಶೊಗೇನಾದರು ಹೋದರೆ ಸಿನಿಮಾ ಮುಗಿಯುವಾಗ ೧೦.೦೦ ಗಂಟೆ. ಮತ್ತೆ ಕಗ್ಗದಾಸಪುರಕ್ಕೆ ಬಸ್ಸು ಸಿಗುವದೇ ಕಷ್ಟದ ವಿಚಾರವೇ ಸರಿ ಎಂದು ತಿಳಿದು, ಆ ಕಾರ್ಯಕ್ರಮವನ್ನು ಅಲ್ಲಿಗೆ ಕೈ ಬಿಟ್ಟು ಸಿ.ಎಂ.ಎಚ್. ರಸ್ತೆಯಲ್ಲಿ ಸ್ವಲ್ಪ ಶೋಪಿಂಗ್ ಮಾಡಿ ಮನೆಗೆ ವಾಪಾಸಾದೆವು. ಮತ್ತೆ ಭಾನುವಾರಕ್ಕೆ ಈ ಸಿನಿಮಾ ನೋಡುವ ಕಾರ್ಯಕ್ರಮ ಮುಂದೂಡಲಾಯಿತು. ಆದರೆ ಈ ಸಾರಿ ಸಮಯದ ಬಗ್ಗೆ ಮುಂಜಾಗ್ರತೆ ಮಾಡಬೇಕೆಂದು ತಲೆಯಲ್ಲಿ ಗಟ್ಟಿಯಾಗಿ ಕೊರೆದಿಟ್ಟಿದ್ದೆ.

ಭಾನುವಾರ ಎಲ್ಲ ಪ್ರೀ-ಪ್ಲಾನ್ಡ್!! ಹನ್ನೊಂದು ಗಂಟೆಗೆ ಮನೆಯಿಂದ ಹೊರಟೆವು. ಬಸ್ಸಿಗಾಗಿ ಕಾಯಲಿಲ್ಲ, ಕಗ್ಗದಾಸಪುರದಲ್ಲಿ. ಆಫೀಸ್ ತನಕ ಕಾರಲ್ಲಿ ಬಂದು ಅಲ್ಲಿಂದ ಬಸ್ಸು. ಕೂಡಲೇ ಬಸ್ಸು ಸಿಕ್ಕಿ ಅರ್ಧ ಗಂಟೆ ಮೊದಲೇ ಮೆಜೆಸ್ಟಿಕ್ ನಲ್ಲಿ ಹಾಜರ್. ಚಿತ್ರಮಂದಿರ ಎಲ್ಲಿ ಅಂತ ಗೊತ್ತಿರಲಿಲ್ಲ. ಅಲ್ಲಿ ಇಲ್ಲಿ ಸಾಗರ್ ಎಲ್ಲಿ ಎಂದು ಕೇಳಿ ಬಂದು ಮುಟ್ಟುವಾಗಲೇ ಸಮಯಕ್ಕೆ ಹತ್ತಿರ. ಟಿಕೆಟ್ ಎಲ್ಲಾ ಖಾಲಿ. ಮತ್ತೆ ಬ್ಲಾಕಲ್ಲಿ ಎಲ್ಲಾದರು ಸಿಗತ್ತ ಅಂತ ಅಡ್ಡಾಡುತ್ತಿರುವಾಗ ಒಬ್ಬ ಬಂದು ವಿಚಾರಿಸಿದ. ಅವನಿಂದ ಟಿಕೆಟ್ ಪಡೆದಾಗ ಸಿನೆಮಾ ನೋಡಲು ಇಷ್ಟು ಕಷ್ಟಪಟ್ಟು ಬಂದಿದಕ್ಕೂ ಸಾರ್ಥಕವಯಿತು ಅಂತ ಅನಿಸಿತು.

ಚಿತ್ರ ತುಂಬಾ ಚೆನ್ನಾಗಿ, ಜೀವಂತವಾಗಿ ಮೂಡಿಬಂದಿದೆ. ಮಳೆಯ ಹಿನ್ನೆಲೆ, ಕೊಡಗಿನ ಪ್ರಕೃತಿ ಸೌಂದರ್ಯ,ಜೋಗದ ಜಲಪಾತ, ನವಿರಾದ ಕಥೆ. ಗಣೇಶ್ ಅವರ ಅಧ್ಭುತ ನಟನೆ ಪಾತ್ರಕ್ಕೆ ಜೀವತುಂಬಿತ್ತು. ಅನಂತನಾಗ್ ಪೋಷಕ ನಟನಾಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕೇಳಿದಷ್ಟು ಮತ್ತೆ ಕೇಳಬೇಕೆನಿಸುವ ಹಾಡುಗಳು ಚಿತ್ರಕ್ಕೆ ಇನ್ನಷ್ಟು ಮೆರುಗನ್ನ ತಂದುಕೊಟ್ಟಿದೆ. ಒಟ್ಟಿನಲ್ಲಿ ಒಂದು ಉತ್ತಮ ಚಿತ್ರವನ್ನ ಕನ್ನಡಕ್ಕೆ ಯೋಗರಾಜ್ ಭಟ್ ಅವರು ನೀಡಿದ್ದಾರೆ. ಚಿತ್ರ ನೋಡಲು ನಾನು ಪಟ್ಟ ಶ್ರಮ ವ್ಯರ್ಥವಾಗಲಿಲ್ಲ.

6 comments:

shruthi shetty said...

Good One:))))))))))

ಅಮರ said...

ಏನೆ ಸರ್ಕಸ್ ಮಾಡಿ .... ಬಂದರು ... ಒಂದು ಖುಷಿಯನ್ನ ನೀಡಿತು ಅನ್ನೊದೆ ...ಮುಖ್ಯ ಅಲ್ಲವಾ. ಒಳ್ಳೆಯ ಸಿನಿಮಾ .... ಬಿಸಿಲಿನ ಬೆಗೆಯಲಿ ಬೆಂದು ಬಂದವರಿಗೆ ತುಂತುರು ಮಳೆಯ ಸ್ಪ್ಪರ್ಶ ನಿಡುತ್ತೆ.


ಒಲವಿನಿಂದ
ಅಮರ

Prasad Shetty said...

@-ಅಮರ್, ನಿಜ ಅಮರ, ಈ ಬಿಸಿಲ ಬೇಗೆಯಲ್ಲಿ ಬೆಂದ ಜೀವಕ್ಕೆ, ಒಮ್ಮೆ ಮುಂಗಾರು ಮಳೆಯ ತಂಪ ಸವಿದು ಬಂದ ಅನುಭವ.. ಎಲ್ಲ ಕಷ್ಟಗಳ ಮರೆಸುವ ಮುಂಗಾರು ಮಳೆಯನ್ನ ಚೆನ್ನಾಗಿ ಕ್ಯಾಮೆರದಲ್ಲಿ ಅಧ್ಭುತವಾಗಿ ಸೆರೆಹಿಡಿದಿದ್ದಾರೆ.

Prasad Shetty said...

@ Shruthi,
Thanks a Lot.

Unknown said...

Really you are a very good photographer.Although I am interested in this field my busy schedules did not permit me.

Thanks.

Regards from

DINESH SHETTY
DUBAI

sandhya shetty said...

hi u r a good writer photographar i read u r blogs